ಕೋನಿಗ್, ಕಾರ್ಲ್ ರುಡಾಲ್ಫ್
1832-1901. ಶಬ್ದ ವಿಜ್ಞಾನದ ಸಂಶೋಧಕ ಮತ್ತು ಉಪಜ್ಞೆÐಕಾರ (ಇನ್ವೆಂಟರ್). ಈತನ ಜನನ ಜರ್ಮನಿ ದೇಶದ ಪ್ರಷ್ಯದ ಕೊನಿಗ್ಸ್‍ಬರ್ಗ್‍ನಲ್ಲಿ (ನವೆಂಬರ್ 26, 1832). ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಅಧ್ಯಯನಮಾಡಿ 1852ರ ಸುಮಾರಿನಲ್ಲಿ ಪ್ಯಾರಿಸ್‍ಗೆ ಹೋದ. ಈತನ ಹೆಸರು ಪ್ರಸಿದ್ಧಿಗೆ ಬಂದಿರುವುದು ನಾದಶೃಂಗ ಉಪಕರಣಗಳ ತಯಾರಿಕೆಯಿಂದ. ಕರಾರುವಾಕ್ಕು ಮತ್ತು ಉತ್ಕøಷ್ಟತೆಗಳಿಗೆ ಈ ಉಪಕರಣಗಳು ಹೆಸರುವಾಸಿಯಾಗಿದ್ದುವು. ಸಂಗೀತಪ್ರಿಯರಾದ ಪ್ಯಾರಿಸ್ ಜನತೆಯಿಂದ ನಾದಶೃಂಗಗಳಿಗೆ ವಿಪರೀತ ಬೇಡಿಕೆ ಬಂದದ್ದರಿಂದ ಇವುಗಳ ವ್ಯಾಪಾರದಿಂದಲೇ ಕೋನಿಗ್‍ನಿಗೆ ಜೀವನ ನಡೆಸಲು ಸುಲಭವಾಗಿ ಸಾಧ್ಯವಾಯಿತು. ಈತನ ಆಸಕ್ತಿ ಇದ್ದುದು ಶಬ್ದ ವಿಜಾÐನದ ಸಂಶೋಧನೆಗಳಲ್ಲಿ. ಇದರಲ್ಲಿನ ಸಮಸ್ಯೆಗಳನ್ನು ಪರಶೀಲಿಸಲು ಅನೇಕ ಸುಂದರವಾದ ಉಪಕರಣಗಳನ್ನು ನಿಯೋಜಿಸಿದನಲ್ಲದೆ ಅವುಗಳ ನಿರ್ಮಾಣವನ್ನು ಕೂಡ ತಾನೇ ಮಾಡಿದ. ಇವುಗಳಲ್ಲಿ ಉದಹರಿಸಬಹುದಾದವು: 1 ತರಂಗ ಮೋಹಕಾರಕಗಳು. ಇವನ್ನು ಪ್ರಥಮವಾಗಿ ಫಿಲಡೆಲ್ಫಿಯದಲ್ಲಿ 1876ರಲ್ಲಿ ಪ್ರದರ್ಶಿಸಲಾಯಿತು. 2 ಅತಿ ಹೆಚ್ಚು ಸಂಖ್ಯೆಯಲ್ಲಿ ಕರಾರುವಾಕ್ಕಾದ ನಾದಶೃಂಗಗಳನ್ನೊಳಗೊಂಡ ಸ್ವರಮಾಪಕ. ಕೊನಿಗ್‍ನ ಮೂಲಕೃತಿಗಳಲ್ಲಿ ಇತರ ವಿಷಯಗಳ ಜೊತೆಗೆ ವ್ಹೀಟ್‍ಸ್ಟನ್‍ನ ಶಬ್ದಾಕೃತಿಗಳು, ವಿವಿಧ ಸ್ವರಾಕ್ಷರಗಳ ವೈಶಿಷ್ಟ್ಯನಾದ ಇವೂ ಸೇರಿದ್ದುವು. ಈತ ಕಾಲವಾದದ್ದು ಪ್ಯಾರಿಸ್‍ನಲ್ಲಿ (ಅಕ್ಟೋಬರ್ 2, 1901).     			(ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ